Wednesday, August 22, 2012

ಜಾನಪದ ಹಾಡು ನೀ ಬರಲಿಲ್ಲ ಯಾಕ ನನ್ನ ನೋಡಾಕ ನಾ ಸಿಗಲೇನ ಇವತ್ತು ಸಂಜಿಕಾ ನಾ ಸೊರಗೀನಿ ನಿನ್ನ ಚಿಂತ್ಯಾಗ ಒಮ್ಮೆ ಮುಖ ತೋರಿಸಿ ಹಾಂಗ ಹೋಗ್ತೀನಿ ಯಾಕೋ ಗೆಳೆಯ ಹಿಂಗಾಗಿಯೊ ನಾ ಬಂದಮ್ಯಾಲ ಯಾಕ ಅಳತಿಯೊ ನಾನು ನಮ್ಮ ಪ್ರೀತಿನ ದ್ಯಾವರಂತ ನಂಬಿನೋ ನಿನ್ನ ಅಗಲಿ ಬದಕೊ ಜೀವ ಇದು ಅಲ್ಲೋ ನೀನು ಎಲ್ಲೊ ನಾನು ಅಲ್ಲೆ ಇರತೇನೊ ನೀ ಬರಲಿಲ್ಲ ಯಾಕ ನನ್ನ ನೋಡಾಕ ನಾ ಸಿಗಲೇನ ಇವತ್ತು ಸಂಜಿಕಾ ಹಿಂದಾ ಮುಂದಾ ನೋಡಿದರ ಎಲ್ಲಕಡೆ ನೀ ಇರುತಿ ನಿನ್ನ ನೆನಪ ಜಾಸ್ತಿಯಾಗಿ ಕಣ್ಣಲ್ಲಿ ಕೊಲ್ಲುತಿ ಬಾಳೆಂದರ ನಾ ಹ್ಯಾಂಗ ಬಾಳಲಿ ನೀ ಹೇಳ ಗೆಳತಿ ಮರೆತಿಯೇನಾ ಗೆಳತಿ ನನ್ನ ಮರೆತಿಯೇನಾ? ಮರೆತಿಲ್ಲೊ ಓ ಗೆಳೆಯಾ ,ಮರೆಯೆಲ್ಲೊ ನನ್ನೊಡೆಯಾ ಮನಿಯಾಗ ಮದುವಿ ಸುದ್ದಿ ತಗದಾರೊ ಬ್ಯಾರೆವನಗ ನನ್ನ ತೋರಿಸ್ಯಾರೊ ನೀ ಕಟ್ಟಿದರ ಅದುವೆ ತಾಳಿನೊ ಇಲ್ಲಾಂದ್ರ ಅದು ನಂಗ ಹಗ್ಗಾನೊ ನೀ ಬರಲಿಲ್ಲ ಯಾಕ ನನ್ನ ನೋಡಾಕ ನಾ ಸಿಗಲೇನ ಇವತ್ತು ಸಂಜಿಕಾ ನೂತನ ಪ್ರಯತ್ನ.. ಮಂಜು ವರಗಾ


No comments: